ಮೊದಲು ಹೆಚ್.ಎಮ್.ಎಸ್ ಹರ್ಕ್ಯುಲಸ್ (ಆರ್ ೪೯) ಎಂದು ಕರೆಯಲ್ಪಡುತ್ತಿದ್ದ ಐ.ಎನ್.ಎಸ್ ವಿಕ್ರಾಂತ್ (ಸಂಸ್ಕೃತ: विक्रान्‍त) ನೌಕೆಯು ಬ್ರಿಟಿಷ್ ನೌಕಾಸೇನೆಯ ಮೆಜೆಸ್ಟಿಕ್ ವರ್ಗದ ನೌಕೆಯಾಗಿತ್ತು. ಪ್ರಸ್ತುತ ಇದು ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆಯಾಗಿದೆ. == ವಿಶ್ವದ ಹಳೆಯ ಯುದ್ಧವಿಮಾನ ವಾಹಕ ನೌಕೆ == -*ವಿಶ್ವದ ಅತ್ಯಂತ ಹಳೆಯ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್‌ ಮಾರ್ಚ್‌ 6 ರಂದು ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತಿಯಾಗಲಿದೆ. ಅತ್ಯಂತ ದೀರ್ಘಕಾಲ ಸೇವೆಯಲ್ಲಿದ್ದ ಯುದ್ಧನೌಕೆ ಎಂಬ ಗಿನ್ನೆಸ್‌ ದಾಖಲೆ ಈ ನೌಕೆ ಹೆಸರಿನಲ್ಲಿದೆ. ಬ್ರಿಟನ್ ನಿರ್ಮಿತ ಈ ನೌಕೆ ಈವರೆಗೆ 56 ವರ್ಷ ಸೇವೆ ಸಲ್ಲಿಸಿದೆ. ಮೊದಲಿಗೆ ಬ್ರಿಟನ್‌ನ ನೌಕಾ ಪಡೆ ‘ರಾಯಲ್‌ ನೇವಿ’ಯಲ್ಲಿ ಸೇವೆಯಲ್ಲಿದ್ದ ಈ ನೌಕೆಯನ್ನು ಆಗ ಎಚ್‌ಎಂಎಸ್‌ ಹರ್ಮಿಸ್ ಎಂದು ಕರೆಯಲಾಗುತ್ತಿತ್ತು. ಭಾರತೀಯ ನೌಕಾಪಡೆ ಇದನ್ನು ಖರೀದಿಸಿದ ನಂತರ ‘ಐಎನ್‌ಎಸ್ ವಿರಾಟ್’ ಎಂದು ಮರುನಾಮಕರಣ ಮಾಡಲಾಗಿತ್ತು. ವಿದಾಯ ಕಾರ್ಯಕ್ರಮ== ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರ ಅಧ್ಯಕ್ಷತೆಯಲ್ಲಿ ನೌಕಾಪಡೆಯ ಸಿಬ್ಬಂದಿ ನೌಕೆಗೆ ವಿದಾಯ ಹೇಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟನ್‌ ರಾಯಲ್‌ ನೇವಿಯ 20 ಅಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜಕುಮಾರನ ಹೆಸರು: 1975ರಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್‌, ಈ ನೌಕೆಯಲ್ಲೇ ತಮ್ಮ ಸೇನಾ ಪೈಲಟ್‌ ವೃತ್ತಿಯನ್ನು ಆರಂಭಿಸಿದ್ದರು. ಈ ನೆನಪಿಗಾಗಿ ನೌಕೆಯ ಒಂದು ಕೊಠಡಿಗೆ ರಾಜಕುಮಾರನ ಹೆಸರನ್ನು ಇಡಲಾಗಿದೆ. ಒಟ್ಟು 56 ವರ್ಷ ಸೇವೆ. == ಮಾರ್ಚ್‌ 6ರಂದು ನಿವೃತ್ತಿ == ಮಾರ್ಚ್‌ 6ರಂದು ಮುಂಬೈನಲ್ಲಿ ಸೇವೆಯಿಂದ ನಿವೃತ್ತಿ. ಬ್ರಿಟನ್‌ನ ರಾಯಲ್ ನೇವಿಯ 20 ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ. ದೀರ್ಘ ಪಯಣ 1944: ನೌಕೆಯ ನಿರ್ಮಾಣಕ್ಕೆ ಚಾಲನೆ 1959: ರಾಯಲ್ ನೇವಿಗೆ ಸೇರ್ಪಡೆ 1986: ರಾಯಲ್ ನೇವಿಯಿಂದ ನೌಕೆ ಖರೀದಿಸಿದ ಭಾರತ 1987: ಭಾರತೀಯ ನೌಕಾಪಡೆಯ ಸೇವೆಗೆ ನಿಯೋಜನೆ 1989: ಶ್ರೀಲಂಕಾ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಭಾಗಿ 1999: ಕಾರ್ಗಿಲ್ ಯುದ್ಧ– ಆಪರೇಷನ್ ವಿಜಯ್‌ನಲ್ಲಿ ಭಾಗಿ 2017, ಮಾರ್ಚ್ 6: ಸೇವೆಯಿಂದ ನಿವೃತ್ತಿಯಾಗಲಿದೆ. ವಿಶೇಷತೆ ವಿಶ್ವದ ಹಳೆಯ ಯುದ್ಧನೌಕೆ 29 ವರ್ಷ ಭಾರತದ ಸೇವೆಯಲ್ಲಿ ಬ್ರಿಟನ್‌ ಮತ್ತು ಭಾರತದ ನೌಕಾ ಪಡೆಯಲ್ಲಿದ್ದಾಗ ನಾಲ್ಕು ಪ್ರಮುಖ ಯುದ್ಧ ಮತ್ತು ಕಾರ್ಯಾಚರಣೆಗಳಲ್ಲಿ ನೌಕೆ ಬಳಕೆ. 27ವರ್ಷ ಬ್ರಿಟನ್ ಸೇವೆಯಲ್ಲಿ. ನಿವೃತ್ತಿ ನಂತರ ನೌಕೆಯ ಮಂದಿನ ಕತೆ ಏನು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ == ನೋಡಿ == == ಉಲ್ಲೇಖ ==